ಈ ಜಗತ್ತಿನಲ್ಲಿ ಜನಿಸುವ ಪ್ರತಿಯೊಬ್ಬ ಮನುಷ್ಯನಿಗೂ ಅವನ ಜನ್ಮ ರಾಶಿಯನ್ನು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ. ಯಾಕೆಂದರೆ ಈ ಜನ್ಮ ರಾಶಿಯ ಮುಖೇನ ಅವನು ತನ್ನ ಜೀವನದಲ್ಲಿ ಮುಂದೆ ಘಟಿಸಬಹುದಾದಂತಹ ತೊಂದರೆಗಳನ್ನು ತಜ್ಞ ಜ್ಯೋತಿಷಿಗಳಿಂದ ತಿಳಿದು ಕೆಲವು ಮುಂಜಾಗರೂಕತೆಯನ್ನು ತೆಗೆದುಕೊಂಡು ಆ ತೊಂದರೆಗಳಿಂದ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಿ ಕೊಳ್ಳಬಹುದು. ಅದರಂತೆ ನಾವು ಈ ಲೇಖನದಲ್ಲಿ ನೀವು ನಿಮ್ಮ ಜನ್ಮ ರಾಶಿಯನ್ನು ಅತೀ ಸುಲಭವಾಗಿ ತಿಳಿದುಕೊಳ್ಳುವಂತೆ ಕೋಷ್ಟಕಗಳ ಮೂಲಕ ವಿವರಿಸಿದ್ದೇವೆ. ಬನ್ನಿ ನಿಮ್ಮ ಜನ್ಮ ರಾಶಿಯನ್ನ ತಿಳಿದುಕೊಳ್ಳೋಣ.
ಹೆಸರಿನಿಂದ ಜನ್ಮ ರಾಶಿಚಕ್ರವನ್ನು ತಿಳಿದುಕೊಳ್ಳುವುದು ಹೇಗೆಂದು ತಿಳಿಯೋಣ
ಜನ್ಮ ರಾಶಿ ಚಕ್ರವು ಮೂಲತಃ ನಿಮ್ಮ ಚಂದ್ರನ ಚಿಹ್ನೆ. ವೈದಿಕ ಜ್ಯೋತಿಷ್ಯದಲ್ಲಿ ಚಂದ್ರನು ನಮ್ಮ ಮನಸ್ಸಿನ ಪ್ರತಿನಿಧಿ. ಮನುಷ್ಯನು ತನ್ನ ಜೀವನದಲ್ಲಿ ನಡೆಸುವ ಎಲ್ಲಾ ಭೌತಿಕ ಮತ್ತು ಮಾನಸಿಕ ಚಟುವಟಿಕೆಗಳನ್ನು ಚಂದ್ರನ ಗ್ರಹದ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ಅದರ ಸ್ಥಾನವು ವ್ಯಕ್ತಿಯ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಸಹ ಸೂಚಿಸುತ್ತದೆ. ನಾವು ವಿಷಯಗಳನ್ನು ಹೇಗೆ ಗ್ರಹಿಸಲಿದ್ದೇವೆ ಮತ್ತು ನಾವು ಹೇಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂಬುದು ಸಂಪೂರ್ಣವಾಗಿ ಮನಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಜನ್ಮ ನಕ್ಷತ್ರವನ್ನು ಚಂದ್ರನ ಚಿಹ್ನೆಯ ಮೂಲಕ ವಿಶ್ಲೇಷಿಸಲಾಗುತ್ತದೆ ಏಕೆಂದರೆ ಇದು ವ್ಯಕ್ತಿಯ ಮಾನಸಿಕ ಸ್ಥಿರತೆಯನ್ನು ಸೂಚಿಸುತ್ತದೆ.
ಹಿಂದಿನ ಕಾಲದಲ್ಲಿ ಜ್ಯೋತಿಷ್ ಶಾಸ್ತ್ರದಲ್ಲಿ ವ್ಯಕ್ತಿಯ ಹೆಸರಿನಿಂದ ಜನ್ಮ ರಾಶಿ ಚಕ್ರವನ್ನು ತಿಳಿದುಕೊಳ್ಳಬಹುದಿತ್ತು ಹೇಗೆಂದರೆ ಮಗು ಹುಟ್ಟಿದ ಕೂಡಲೇ ಮಗುವಿನ ತಂದೆ ತಾಯಿ ಅಥವಾ ಪೋಷಕರು ಮೊದಲಿಗೆ ಜೋಯೀಸರಲ್ಲಿ ಹೋಗಿ ಮಗುವಿನ ಹುಟ್ಟಿದ ಸಮಯ, ದಿನಾಂಕ ಮತ್ತು ಸ್ಥಳದ ವಿವರಗಳನ್ನು ನೀಡಿ ಮಗುವಿನ ಹೆಸರನ್ನು ಸೂಚಿಸಲು ಕೇಳಿಕೊಳ್ಳುತಿದ್ದರು.
ಜೋಯಿಸರು ಎಲ್ಲ ವಿವರಗಳನ್ನು ಪಡೆದು ರಾಶಿಚಕ್ರದ ಪ್ರಕಾರ ಕೆಲವು ಅಕ್ಷರಗಳ ಸಲಹೆಯನ್ನು ನೀಡುತಿದ್ದರು ಉದಾಹರಣೆಗೆ ಹೇಳುವುದಾದರೆ ಮೇಷ ರಾಶಿಯಲ್ಲಿ ಮಗುವಿನ ಜನನ ಆಗಿದ್ದರೆ ಅ, ಚ, ಚು, ಚೆ, ಲ, ಲಿ, ಲು, ಲೆ ಅಕ್ಷರಗಳಿಂದ ಪ್ರಾರಂಭ ಆಗುವಂತೆ ಮಗುವಿಗೆ ಹೆಸರನ್ನಿಡಲು ಸೂಚಿಸುತ್ತಿದ್ದರು ಇದರಿಂದ ಯಾವುದೇ ಮಗುವಿನ ಹೆಸರು ಅ, ಚ, ಚು, ಚೆ, ಲ, ಲಿ, ಲು, ಲೆ ಪ್ರಾರಂಭವಾದರೆ ಆ ಮಗುವಿನ ರಾಶಿ ಚಕ್ರ ಮೇಷ ಆಗಿರುತ್ತಿತ್ತು.
ಆದರೆ ಈಗ ಕಾಲ ಬದಲಾಗಿದೆ ಮಗುವಿನ ಪೋಷಕರು ತಮಗೆ ಇಷ್ಟ ಬಂಡ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ನಾಮಕರಣ ಮಾಡುವ ಮೂಲಕ ಬರಿ ಹೆಸರಿನಿಂದ ಜನ್ಮ ರಾಶಿ ಹೇಳುವುದು ತುಸು ಕಷ್ಟ, ಆದರೂ ನಾವು ಇಲ್ಲಿ ಕೆಳಗೆ ಕೋಷ್ಟಕಡಾ ಮೂಲಕ ತಮಗೆ ಹೆಸರಿನಿಂದ ರಾಶಿ ತಿಳಿಯುವ ಬಗೆ ತಿಳಿಸಿದ್ದೇವೆ.
ಜನ್ಮ ರಾಶಿ | ರಾಶಿಯ ಅನುಸಾರ ಹೆಸರಿನ ಮೊದಲ ಅಕ್ಷರ |
---|---|
ಮೇಷ | ಅ, ಚ, ಚು, ಚೆ, ಲ, ಲಿ, ಲು, ಲೆ |
ವೃಷಭ | ಉ, ಎ, ಈ, ಔ, ದ, ದೀ, ವೊ |
ಮಿಥುನ | ಕೆ, ಕೊ, ಕೆ, ಘ, ಛ, ಹ, ಡ |
ಕರ್ಕ | ಹಾ, ಹೇ, ಹೋ, ಡಾ, ಹೀ, ಡೋ |
ಸಿಂಹ | ಮಿ, ಮೇ, ಮಿ, ಟೇ, ಟಾ, ಟೀ |
ಕನ್ಯಾ | ಪ, ಷ, ಣ, ಪೆ, ಪೊ, ಪ |
ತುಲಾ | ರೇ, ರೋ, ರಾ, ತಾ, ತೇ, ತೂ |
ವೃಶ್ಚಿಕ | ಲೊ, ನೆ, ನಿ, ನೂ, ಯಾ, ಯಿ |
ಧನು | ಧಾ, ಯೇ, ಯೋ, ಭಿ, ಭೂ, ಫಾ, ಢಾ |
ಮಕರ | ಜಾ, ಜಿ, ಖೋ, ಖೂ, ಗ, ಗೀ, ಭೋ |
ಕುಂಭ | ಗೆ, ಗೋ, ಸಾ, ಸೂ, ಸೆ, ಸೋ, ದ |
ಮೀನ | ದೀ, ಚಾ, ಚಿ, ಝ, ದೋ, ದೂ |
ಹುಟ್ಟಿದ ದಿನಾಂಕದ ಮೂಲಕ ಜನ್ಮ ರಾಶಿಯನ್ನು ತಿಳಿಯುವ ಬಗೆ
ಹುಟ್ಟಿದ ದಿನಾಂಕದ ಮೂಲಕ ಜನ್ಮ ರಾಶಿಯನ್ನು ತಿಳಿಯುವುದು ತುಂಬಾನೇ ಪ್ರಶಸ್ತ. ತುಂಬಾ ಕರಾರುವಕ್ಕಾಗಿ ಅಲ್ಲದೆ ಇದ್ದರೂ ತಾವು ತಮ್ಮ ರಾಶಿಯನ್ನು ಊಹೆ ಮಾಡಬಹುದು ಬನ್ನಿ ಹುಟ್ಟಿದ ದಿನಾಂಕದ ಮೂಲಕ ಅಥವಾ ಜನ್ಮ ದಿನಾಂಕದ ಮೂಲಕ ರಾಶಿಯನ್ನು ತಿಳಿದುಕೊಳ್ಳೋಣ.
ಕೆಳಗೆ ಕೊಟ್ಟಿರುವ ಕೋಷ್ಠಕದ ಮೂಲಕ ತಾವು ತಮ್ಮ ಜನ್ಮ ರಾಶಿಯನ್ನು ತಿಳಿದುಕೊಳ್ಳಬಹುದು. ಉದಾಹರಣೆಗೆ ತಮ್ಮ ಜನನವು ಏಪ್ರಿಲ್ ತಿಂಗಳ ೨೧ನೇ ತಾರೀಕಿನಂದು ಆಗಿದ್ದರೆ ನಮ್ಮ ಕೋಷ್ಠಕದ ಪ್ರಕಾರ ವೃಷಭ ರಾಶಿ ಆಗಿರುತ್ತದೆ. ಈ ಉದಾಹರಣೆಯನ್ನು ಗಮನಿಸುವ ಮೂಲಕ ನೀವು ನಿಮ್ಮ ಜನ್ಮ ರಾಶಿಯನ್ನು ಕೆಳಗಡೆ ಕೊಟ್ಟಿರುವ ಕೋಷ್ಟಕದಿಂದ ತಿಳಿಯಬಹುದು.
ರಾಶಿ | ಹುಟ್ಟಿದ ದಿನಾಂಕ |
---|---|
ಮೇಷ | 21 ಮಾರ್ಚ್ – 20 ಏಪ್ರಿಲ್ |
ವೃಷಭ | 21 ಏಪ್ರಿಲ್ – 21 ಮೇ |
ಮಿಥುನ | 22 ಮೇ – 21 ಜೂನ್ |
ಕರ್ಕ | 22 ಜೂನ್ – 22 ಜುಲೈ |
ಸಿಂಹ | 23 ಜುಲೈ – 21 ಆಗಸ್ಟ್ |
ಕನ್ಯಾ | 22 ಆಗಸ್ಟ್ to 23 ಸೆಪ್ಟೆಂಬರ್ |
ತುಲಾ | 24 ಸೆಪ್ಟೆಂಬರ್ – 23 ಅಕ್ಟೋಬರ್ |
ವೃಶ್ಚಿಕ | 24 ಅಕ್ಟೋಬರ್ – 22 ನವೆಂಬರ್ |
ಧನು | 23 ನವೆಂಬರ್ – 22 ಡಿಸೆಂಬರ್ |
ಮಕರ | 23 ಡಿಸೆಂಬರ್ – 20 ಜನವರಿ |
ಕುಂಭ | 21 ಜನವರಿ – 19 ಫೆಬ್ರವರಿ |
ಮೀನ | 20 ಫೆಬ್ರವರಿ – 20 ಮಾರ್ಚ್ |
ಹೆಸರಿನಿದ್ನ ಮತ್ತು ಜನ್ಮ ದಿನಾಂಕದಿಂದ ನಿಮ್ಮ ಜನ್ಮ ರಾಶಿಯನ್ನು ತಿಳಿಯುವುದು ಬಲು ಸುಲಭ ಆದರೆ ನಮ್ಮ ಸಲೆಹೆ ನಿಮಗೆ ನೀವು ನಿಮ್ಮ ಜಾತಕದ ಮೂಲಕ ಜನ್ಮ ರಾಶಿಯನ್ನು ತಿಳಿದುಕೊಳ್ಳುವುದು ಅತೀ ಉತ್ತಮ.
ಜ್ಯೋತಿಷ್ಯದಲ್ಲಿ ಜನ್ಮ ರಾಶಿಯ ಮಹತ್ವ
ಜ್ಯೋತಿಷ್ಯದಲ್ಲಿ ಜನ್ಮ ರಾಶಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದು ನಿಮ್ಮ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೇಳುತ್ತದೆ. ರಾಶಿಚಕ್ರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತ್ರವಲ್ಲದೆ ನಿಮ್ಮ ಜೀವನವನ್ನು ನೀವು ಹೇಗೆ ಬದುಕುತ್ತೀರಿ ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. ರಾಶಿಚಕ್ರದ ಚಿಹ್ನೆಗಳಲ್ಲಿ ಅಂಶಗಳೂ ಇವೆ ಮತ್ತು ಪ್ರತಿಯೊಬ್ಬ ವ್ಯಕ್ತಿಯು ಅಂಶಗಳ ಪ್ರಕಾರ ವಿಭಿನ್ನವಾಗಿರಬಹುದು. ರಾಶಿಚಕ್ರದ ಚಿಹ್ನೆಗಳನ್ನು ಮುಖ್ಯವಾಗಿ ನಾಲ್ಕು ಅಂಶಗಳಾಗಿ ವಿಂಗಡಿಸಲಾಗಿದೆ – ಬೆಂಕಿ, ಗಾಳಿ, ನೀರು, ಭೂಮಿ. ನಮ್ಮ ಈ ಲೇಖನದಿಂದ ನಿಮ್ಮ ಜೀವನದ ಮೇಲೆ ರಾಶಿಚಕ್ರದ ಪರಿಣಾಮ ಏನು ಎಂದು ಈಗ ನಿಮಗೆ ತಿಳಿದಿರಬೇಕು.
Leave a Comment