ಲೇಖನಗಳು

ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ ಮತ್ತು ಸಂಪೂರ್ಣ ಪರಿಚಯ

Updated: 14-04-2024, 09.22 ಫೂರ್ವಾಹ್ನ
3 min read
ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ ಮತ್ತು ಸಂಪೂರ್ಣ ಪರಿಚಯ

ಶ್ರೀ ರಾಮ ರಕ್ಷಾ ಸ್ತೋತ್ರದ ಪಠಣವು ರಾಮ ಭಕ್ತರಿಗೆ ರಕ್ಷಣೆಯನ್ನು ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಅಲ್ಲದೆ ಶ್ರೀ ರಾಮ ರಕ್ಷಾ ಸ್ತೋತ್ರ ಒಂದು ಮಹತ್ವದ ಹಿಂದೂ ಧಾರ್ಮಿಕ ಸ್ತೋತ್ರ ಕೂಡ ಆಗಿದೆ. ಈ ಲೇಖನದಲ್ಲಿ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಣ ಮಾಡುವ ಬಗೆ ಮತ್ತು ಪಠಣ ಮಾಡುವುದರಿಂದ ನಮಗೆ ಸಿಗಬಹುದಾದ ಪ್ರಯೋಜನಗಳ ಬಗ್ಗೆ ವಿವರವಾಗಿ ವಿವರಿಸಿದ್ದೇವೆ. ಬನ್ನಿ ಮೊದಲಿಗೆ ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಣ ಮಾಡೋಣ.

ಶ್ರೀ ರಾಮ

ಶ್ರೀ ರಾಮ ರಕ್ಷಾ ಸ್ತೋತ್ರ

ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ

ಬುಧಕೌಶಿಕ ಋಷಿಃ

ಶ್ರೀ ಸೀತಾರಾಮ ಚಂದ್ರೋದೇವತಾ

ಅನುಷ್ಟುಪ್ ಛಂದಃ

ಸೀತಾ ಶಕ್ತಿಃ

ಶ್ರೀಮದ್ ಹನುಮಾನ್ ಕೀಲಕಂ

ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥

ಧ್ಯಾನಂ

ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ

ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ ।

ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂ

ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥

ಸ್ತೋತ್ರಂ

ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ ।

ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾಶನಮ್ ॥ 1 ॥

ಧ್ಯಾತ್ವಾ ನೀಲೋತ್ಪಲ ಶ್ಯಾಮಂ ರಾಮಂ ರಾಜೀವಲೋಚನಮ್ ।

ಜಾನಕೀ ಲಕ್ಷ್ಮಣೋಪೇತಂ ಜಟಾಮುಕುಟ ಮಂಡಿತಮ್ ॥ 2 ॥

ಸಾಸಿತೂಣ ಧನುರ್ಬಾಣ ಪಾಣಿಂ ನಕ್ತಂ ಚರಾಂತಕಮ್ ।

ಸ್ವಲೀಲಯಾ ಜಗತ್ತ್ರಾತು ಮಾವಿರ್ಭೂತಮಜಂ ವಿಭುಮ್ ॥ 3 ॥

ರಾಮರಕ್ಷಾಂ ಪಠೇತ್ಪ್ರಾಜ್ಞಃ ಪಾಪಘ್ನೀಂ ಸರ್ವಕಾಮದಾಮ್ ।

ಶಿರೋ ಮೇ ರಾಘವಃ ಪಾತು ಫಾಲಂ (ಭಾಲಂ) ದಶರಥಾತ್ಮಜಃ ॥ 4 ॥

ಕೌಸಲ್ಯೇಯೋ ದೃಶೌಪಾತು ವಿಶ್ವಾಮಿತ್ರಪ್ರಿಯಃ ಶೃತೀ ।

ಘ್ರಾಣಂ ಪಾತು ಮಖತ್ರಾತಾ ಮುಖಂ ಸೌಮಿತ್ರಿವತ್ಸಲಃ ॥ 5 ॥

ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ ।

ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಗ್ನೇಶಕಾರ್ಮುಕಃ ॥ 6 ॥

ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್ ।

ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ ॥ 7 ॥

ಸುಗ್ರೀವೇಶಃ ಕಟಿಂ ಪಾತು ಸಕ್ಥಿನೀ ಹನುಮತ್-ಪ್ರಭುಃ ।

ಊರೂ ರಘೂತ್ತಮಃ ಪಾತು ರಕ್ಷಃಕುಲ ವಿನಾಶಕೃತ್ ॥ 8 ॥

ಜಾನುನೀ ಸೇತುಕೃತ್-ಪಾತು ಜಂಘೇ ದಶಮುಖಾಂತಕಃ ।

ಪಾದೌ ವಿಭೀಷಣಶ್ರೀದಃ ಪಾತು ರಾಮೋಽಖಿಲಂ ವಪುಃ ॥ 9 ॥

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್ ।

ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್ ॥ 10 ॥

ಪಾತಾಳ-ಭೂತಲ-ವ್ಯೋಮ-ಚಾರಿಣ-ಶ್ಚದ್ಮ-ಚಾರಿಣಃ ।

ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ ॥ 11 ॥

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್ ।

ನರೋ ನ ಲಿಪ್ಯತೇ ಪಾಪೈರ್ಭುಕ್ತಿಂ ಮುಕ್ತಿಂ ಚ ವಿಂದತಿ ॥ 12 ॥

ಜಗಜ್ಜೈತ್ರೈಕ ಮಂತ್ರೇಣ ರಾಮನಾಮ್ನಾಭಿ ರಕ್ಷಿತಮ್ ।

ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವಸಿದ್ಧಯಃ ॥ 13 ॥

ವಜ್ರಪಂಜರ ನಾಮೇದಂ ಯೋ ರಾಮಕವಚಂ ಸ್ಮರೇತ್ ।

ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಳಮ್ ॥ 14 ॥

ಆದಿಷ್ಟವಾನ್-ಯಥಾ ಸ್ವಪ್ನೇ ರಾಮರಕ್ಷಾಮಿಮಾಂ ಹರಃ ।

ತಥಾ ಲಿಖಿತವಾನ್-ಪ್ರಾತಃ ಪ್ರಬುದ್ಧೌ ಬುಧಕೌಶಿಕಃ ॥ 15 ॥

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಮ್ ।

ಅಭಿರಾಮ-ಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸ ನಃ ಪ್ರಭುಃ ॥ 16 ॥

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ ।

ಪುಂಡರೀಕ ವಿಶಾಲಾಕ್ಷೌ ಚೀರಕೃಷ್ಣಾಜಿನಾಂಬರೌ ॥ 17 ॥

ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ ।

ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ ॥ 18 ॥

ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌ ಸರ್ವಧನುಷ್ಮತಾಮ್ ।

ರಕ್ಷಃಕುಲ ನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ ॥ 19 ॥

ಆತ್ತ ಸಜ್ಯ ಧನುಷಾ ವಿಷುಸ್ಪೃಶಾ ವಕ್ಷಯಾಶುಗ ನಿಷಂಗ ಸಂಗಿನೌ ।

ರಕ್ಷಣಾಯ ಮಮ ರಾಮಲಕ್ಷಣಾವಗ್ರತಃ ಪಥಿ ಸದೈವ ಗಚ್ಛತಾಮ್ ॥ 20 ॥

ಸನ್ನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ ।

ಗಚ್ಛನ್ ಮನೋರಥಾನ್ನಶ್ಚ (ಮನೋರಥೋಽಸ್ಮಾಕಂ) ರಾಮಃ ಪಾತು ಸ ಲಕ್ಷ್ಮಣಃ ॥ 21 ॥

ರಾಮೋ ದಾಶರಥಿ ಶ್ಶೂರೋ ಲಕ್ಷ್ಮಣಾನುಚರೋ ಬಲೀ ।

ಕಾಕುತ್ಸಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ ॥ 22 ॥

ವೇದಾಂತವೇದ್ಯೋ ಯಜ್ಞೇಶಃ ಪುರಾಣ ಪುರುಷೋತ್ತಮಃ ।

ಜಾನಕೀವಲ್ಲಭಃ ಶ್ರೀಮಾನಪ್ರಮೇಯ ಪರಾಕ್ರಮಃ ॥ 23 ॥

ಇತ್ಯೇತಾನಿ ಜಪೇನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ ।

ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯಃ ॥ 24 ॥

ರಾಮಂ ದೂರ್ವಾದಳ ಶ್ಯಾಮಂ ಪದ್ಮಾಕ್ಷಂ ಪೀತವಾಸಸಮ್ ।

ಸ್ತುವಂತಿ ನಾಭಿ-ರ್ದಿವ್ಯೈ-ರ್ನತೇ ಸಂಸಾರಿಣೋ ನರಾಃ ॥ 25 ॥

ರಾಮಂ ಲಕ್ಷ್ಮಣ ಪೂರ್ವಜಂ ರಘುವರಂ ಸೀತಾಪತಿಂ ಸುಂದರಂ

ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಮ್ ।

ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ

ವಂದೇ ಲೋಕಾಭಿರಾಮಂ ರಘುಕುಲ ತಿಲಕಂ ರಾಘವಂ ರಾವಣಾರಿಮ್ ॥ 26 ॥

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ॥ 27 ॥

ಶ್ರೀರಾಮ ರಾಮ ರಘುನಂದನ ರಾಮ ರಾಮ

ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ ।

ಶ್ರೀರಾಮ ರಾಮ ರಣಕರ್ಕಶ ರಾಮ ರಾಮ

ಶ್ರೀರಾಮ ರಾಮ ಶರಣಂ ಭವ ರಾಮ ರಾಮ ॥ 28 ॥

ಶ್ರೀರಾಮ ಚಂದ್ರ ಚರಣೌ ಮನಸಾ ಸ್ಮರಾಮಿ

ಶ್ರೀರಾಮ ಚಂದ್ರ ಚರಣೌ ವಚಸಾ ಗೃಹ್ಣಾಮಿ ।

ಶ್ರೀರಾಮ ಚಂದ್ರ ಚರಣೌ ಶಿರಸಾ ನಮಾಮಿ

ಶ್ರೀರಾಮ ಚಂದ್ರ ಚರಣೌ ಶರಣಂ ಪ್ರಪದ್ಯೇ ॥ 29 ॥

ಮಾತಾ ರಾಮೋ ಮತ್-ಪಿತಾ ರಾಮಚಂದ್ರಃ

ಸ್ವಾಮೀ ರಾಮೋ ಮತ್-ಸಖಾ ರಾಮಚಂದ್ರಃ ।

ಸರ್ವಸ್ವಂ ಮೇ ರಾಮಚಂದ್ರೋ ದಯಾಳುಃ

ನಾನ್ಯಂ ಜಾನೇ ನೈವ ಜಾನೇ ನ ಜಾನೇ ॥ 30 ॥

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ಚ (ತು) ಜನಕಾತ್ಮಜಾ ।

ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್ ॥ 31 ॥

ಲೋಕಾಭಿರಾಮಂ ರಣರಂಗಧೀರಂ

ರಾಜೀವನೇತ್ರಂ ರಘುವಂಶನಾಥಮ್ ।

ಕಾರುಣ್ಯರೂಪಂ ಕರುಣಾಕರಂ ತಂ

ಶ್ರೀರಾಮಚಂದ್ರಂ ಶರಣ್ಯಂ ಪ್ರಪದ್ಯೇ ॥ 32 ॥

ಮನೋಜವಂ ಮಾರುತ ತುಲ್ಯ ವೇಗಂ

ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ ।

ವಾತಾತ್ಮಜಂ ವಾನರಯೂಥ ಮುಖ್ಯಂ

ಶ್ರೀರಾಮದೂತಂ ಶರಣಂ ಪ್ರಪದ್ಯೇ ॥ 33 ॥

ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್ ।

ಆರುಹ್ಯಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ॥ 34 ॥

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ ।

ಲೋಕಾಭಿರಾಮಂ ಶ್ರೀರಾಮಂ ಭೂಯೋಭೂಯೋ ನಮಾಮ್ಯಹಮ್ ॥ 35 ॥

ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಮ್ ।

ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಮ್ ॥ 36 ॥

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ

ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈ ನಮಃ ।

ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ

ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮ ಮಾಮುದ್ಧರ ॥ 37 ॥

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ।

ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ ॥ 38 ॥

ಇತಿ ಶ್ರೀಬುಧಕೌಶಿಕಮುನಿ ವಿರಚಿತಂ ಶ್ರೀರಾಮ ರಕ್ಷಾಸ್ತೋತ್ರಂ ಸಂಪೂರ್ಣಮ್ ।

ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಯಾರು ರಚಿಸಿದರು?

ಶ್ರೀ ಬುಧಕೌಶಿಕ ಋಷಿವರ್ಯರು ಶ್ರೀ ರಾಮ ರಕ್ಷಾ ಸ್ತೋತ್ರವನ್ನು ರಚಿಸಿದರು ಮತ್ತು ದೇವರ ದೇವ ಶಿವನು ಶ್ರೀ ರಾಮ ರಕ್ಷಾ ಸ್ತೋತ್ರವನ್ನು ರಚಿಸಲು ಬುಧಕೌಶಿಕ ಮುನಿಗೆ ರಚಿಸಲು ತಿಳಿಸಿದರು ಎಂದು ನಂಬಲಾಗಿದೆ. ಆದರೆ ಪದ್ಮ ಪುರಾಣದಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ.

ಪದ್ಮ ಪುರಾಣದ ಪ್ರಕಾರ ಮಹಾನ್ ಋಷಿ ವಿಶ್ವಾಮಿತ್ರರು ರಾಮರಕ್ಷಾ ಎಂಬ ಸ್ತೋತ್ರದ ದಾರ್ಶನಿಕ ಎಂದು ಹೇಳುತ್ತದೆ ಕೌಶಿಕ ಎಂದರೆ ವಿಶ್ವಾಮಿತ್ರನ ವಂಶಸ್ಥ ಎಂದು ಅರ್ಥ. ಇನ್ನು ರಾಮ ರಕ್ಷಾ ಸ್ತೋತ್ರವನ್ನು ಭೂಮಿಗೆ ಹೇಗೆ ತಲುಪಿಸಲಾಯಿತು ಎನ್ನುವ ಬಗ್ಗೆ ಪದ್ಮ ಪುರಾಣದಲ್ಲಿ ಉಲ್ಲೇಖವಿದೆ.

ಶ್ರೀ ರಾಮ ರಕ್ಷಾ ಸ್ತೋತ್ರವನ್ನು ವಸಿಷ್ಠನಿಂದ ವಿಷ್ಣುವಿಗೆ ಹೇಳಲಾಯಿತು, ನಂತರ ಬ್ರಹ್ಮ ದೇವರಿಗೆ ಹೇಳಲಾಯಿತು ಬ್ರಹ್ಮ ದೇವರಿಂದ ಶಿವನಿಗೆ ಬಂತು ಶಿವನು ನಾರದನಿಗೆ ಹೇಳಿದನು ನಾರದನು ಭೂಮಿಗೆ ಅದನ್ನು ತಂದರು ಎಂದು ಹೇಳಲಾಗಿದೆ.

ಪ್ರತಿದಿನ ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿಸುವುದರಿಂದ ನಮಗೆ ಆಗಬಹುದಾದ ಪ್ರಯೋಜನಗಳೇನು?

ಪ್ರತಿದಿನ ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿಸುವುದರಿಂದ ನಮಗೆ ಆಗಬಹುದಾದ ಪ್ರಯೋಜನಗಳು ಅನೇಕ ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.

  • ಪ್ರತಿದಿನ ರಾಮ ರಕ್ಷಾ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವರ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಜೊತೆಗೆ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳಿಂದಲೂ ಮುಕ್ತಿ ಪಡೆಯಬಹುದು.
  • ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪ್ರತಿದಿನ ಪಠಿಸುವುದರಿಂದ ಶ್ರೀ ರಾಮ ಭಕ್ತ ಹನುಮನು ಸಂತುಷ್ಠನಾಗಿ ರಾಮನ ಭಕ್ತರಿಗೆ ತನ್ನ ಆಶೀರ್ವಾದವನ್ನು ದಯಪಾಲಿಸುತ್ತಾನೆ.
  • ರಾಮ ರಕ್ಷಾ ಸ್ತೋತ್ರವನ್ನು ಪಠಿಸಿದರೆ ಮಹಾದೇವನ ಆಶೀರ್ವಾದ ದೊರೆಯುತ್ತದೆ. ಏಕೆಂದರೆ ಈ ಸ್ತೋತ್ರವನ್ನು ಪರಶಿವನ ಆಜ್ಞೆಯ ಮೇರೆಗೆ ಬುಧ ಕೌಶಿಕ ಋಷಿ ರಚಿಸಿದ್ದಾರೆ ಎಂದು ನಂಬಲಾಗಿದೆ.
  • ರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಮನಸ್ಸಿನಿಂದ ಎಲ್ಲಾ ರೀತಿಯ ಭಯ ದೂರವಾಗಿ ನಿರ್ಭೀತಿಯಿಂದ ಜೀವನ ನಡೆಸಲು ಸಹಾಯ ಮಾಡುತ್ತದೆ.
  • ಇವಿಷ್ಟೇ ಅಲ್ಲದೇ ಶ್ರೀ ರಾಮರಕ್ಷಾಸ್ತೋತ್ರವನ್ನು ಭಕ್ತಿಯಿಂದ ಪಠಿಸುವುದರಿಂದ ಅಂಗಾರಕ ದೋಷ ನಿವಾರಣೆ ಆಗುತ್ತದೆ. ದೀರ್ಘಾಯುಷ್ಯ, ಸಂತಾನ, ಶಾಂತಿ, ಜಯ, ಸುಖ ಮತ್ತು ಸಮೃದ್ಧಿ ದೊರೆಯುತ್ತದೆ.

ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಿಸುವ ಬಗೆ ಹೇಗೆ?

ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸುವ ವಿಧಾನ ಹೀಗಿದೆ:

  • ಮೊದಲು, ನೀವು ನಿಮ್ಮ ದೇಹ ಮತ್ತು ಮನಸ್ಸನ್ನು ಶುದ್ಧವಾಗಿಸಿ ಪೂಜಾ ಸ್ಥಳಕ್ಕೆ ಬನ್ನಿ.
  • ನಿಮ್ಮ ಕೈಯಲ್ಲಿ ಸ್ವಲ್ಪ ನೀರನ್ನು ಹಿಡಿದುಕೊಳ್ಳಿ.
  • ನಂತರ ರಾಮ ರಕ್ಷಾ ಸ್ತೋತ್ರದ ವಿನಿಯೋಗ ಸ್ತೋತ್ರವನ್ನು ಪಠಿಸಲು ಪ್ರಾರಂಭಿಸಿ.
  • ಈ ಸ್ತೋತ್ರವನ್ನು ಪಠಿಸಿದ ನಂತರ ಕೈಯಲ್ಲಿರುವ ನೀರನ್ನು ನೆಲಕ್ಕೆ ಬಿಟ್ಟು, ರಾಮನ ಧ್ಯಾನದತ್ತ ಗಮನ ಹರಿಸಬೇಕು.
  • ಧ್ಯಾನ ಮಂತ್ರವನ್ನು ಮನದಲ್ಲಿ ನೆನೆಯುತ್ತ ಧ್ಯಾನವನ್ನು ಮಾಡಬೇಕು.
  • ಪ್ರತಿನಿತ್ಯ ಈ ಸ್ತೋತ್ರವನ್ನು ಪಠಿಸಿದರೆ, ನಿಮ್ಮ ಕಷ್ಟಗಳು ದೂರವಾಗುತ್ತವೆ ಮತ್ತು ಶ್ರೀರಾಮನ ಕೃಪೆ ಸದಾಕಾಲ ನಿಮ್ಮ ಮೇಲೆ ಇರುತ್ತದೆ.

ಸ್ತೋತ್ರವನ್ನು ಪಠಿಸುವ ಸಮಯದಲ್ಲಿ ಶ್ರದ್ಧೆ ಮತ್ತು ಭಕ್ತಿಯನ್ನು ಹೊಂದಿರಬೇಕು. ಇದು ನಿಮ್ಮ ಮನಸ್ಸಿಗೆ ಶಾಂತಿ ಮತ್ತು ಸಮಾಧಾನ ತರುತ್ತದೆ. ಸ್ತೋತ್ರದ ಪಠಣೆಯು ನಿಮ್ಮ ಜೀವನದಲ್ಲಿ ಶುಭವನ್ನು ತರಲಿ.

ನಿಷ್ಕರ್ಷೆ

ಈ ಲೇಖನದಲ್ಲಿ ಸಂಪೂರ್ಣ ಶ್ರೀರಾಮ ರಕ್ಷಾ ಸ್ತೋತ್ರ, ಶ್ರೀರಾಮ ರಕ್ಷಾ ಸ್ತೋತ್ರದ ಇತಿಹಾಸ, ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸುವುದರಿಂದ ಆಗಬಹುದಾದ ಪ್ರಯೋಜನಗಳು ಮತ್ತು ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸುವ ಬಗೆಯನ್ನು ಸಂಪೂರ್ಣವಾಗಿ ವಿವರಿಸಿದ್ದೇವೆ ನಮ್ಮ ಈ ಪ್ರಯತ್ನ ನಿಮಗೆ ಶ್ರೀರಾಮ ರಕ್ಷಾ ಸ್ತೋತ್ರವನ್ನು ಪಠಿಸಲು ಸಹಾಯ ಮಾಡಿದೆ ಎಂದು ಬಾವಿಸುತ್ತೇವೆ ದಯವಿಟ್ಟು ಈ ಲೇಖನವನ್ನು ನಿಮ್ಮ ಬಂದು ಬಾಂಧವರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.

Related Latest Posts

Leave a Comment

NEWS PRO

At NEWS PRO, we bring you in-depth and unbiased reviews of the latest smartphones, smartwatches, and earbuds. Our expert analysis covers everything from design and performance to features and user experience, helping you make informed decisions.

Contact

2312 Lincoln Street, London, EN3 W15

Call Us: +1-400-232-4545

admin@dohe.in