ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳುವ ಮೊದಲು ನಾವು ಜ್ಯೋತಿಷ್ಯದಲ್ಲಿ ಅಕ್ಷರಗಳು ಮತ್ತು ರಾಶಿಗಳ ನಡುವಿನ ಸಂಬಂಧ ತಿಳಿಯುವುದು ಅತ್ಯಂತ ಮುಖ್ಯವಾಗಿದೆ. ಹಿಂದೂ ಸಂಪ್ರದಾಯದಲ್ಲಿ, ಜನನ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ಜಾತಕದ ಆಧಾರದ ಮೇಲೆ ನವಜಾತ ಶಿಶುವಿನ ಹೆಸರಿಗೆ ಒಂದು ಅಕ್ಷರವನ್ನು ನಿರ್ಧರಿಸುವ ಪದ್ಧತಿಯಿದೆ ಇದನ್ನು ನಾಮಕರಣ ಪದ್ಧತಿ ಎನ್ನುತ್ತಾರೆ.
ಈ ಪದ್ಧತಿಯಲ್ಲಿ, ಪ್ರತಿಯೊಂದು ರಾಶಿಗೂ ನಿರ್ದಿಷ್ಟ ಅಕ್ಷರಗಳು ಅನುಗುಣವಾಗಿವೆ, ಮತ್ತು ಈ ಅಕ್ಷರಗಳು ವ್ಯಕ್ತಿಯ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತವೆ. ಉದಾಹರಣೆಗೆ, ‘ಅ’ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರ ಗುಣಗಳು ಮತ್ತು ಅವರ ಜೀವನದ ವಿವಿಧ ಅಂಶಗಳು ಅವರ ರಾಶಿ ಮತ್ತು ನಕ್ಷತ್ರದ ಆಧಾರದ ಮೇಲೆ ವಿವರಿಸಲಾಗುತ್ತದೆ. ಇದೇ ರೀತಿ, ‘ಬ’ ಅಕ್ಷರದಿಂದ ಆರಂಭಿಸುವ ಹೆಸರಿನ ಜನರ ಮೇಲೆ ಚಂದ್ರನ ಪ್ರಮುಖ ಪರಿಣಾಮವಿರುತ್ತದೆ, ಮತ್ತು ಇದು ವೃಷಭ ರಾಶಿಯ ಜನರಿಗೆ ಸಂಬಂಧಿಸಿದೆ. ಜ್ಯೋತಿಷ್ಯದಲ್ಲಿ ರಾಶಿ ಮತ್ತು ಅಕ್ಷರಗಳ ಈ ಸಂಬಂಧವು ವ್ಯಕ್ತಿಯ ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ವ್ಯಕ್ತಿಯ ಸ್ವಭಾವ, ಆರೋಗ್ಯ, ವೃತ್ತಿ ಜೀವನ, ಸಂಬಂಧಗಳು, ಮತ್ತು ಇತರ ಜೀವನದ ಘಟನಾವಳಿಗಳ ಬಗ್ಗೆ ಮುನ್ನೋಟವನ್ನು ಒದಗಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರವನ್ನು ನಂಬುವ ಜನರು ಹುಟ್ಟಿದ ದಿನಾಂಕದ ಮೇಲೆ ಭವಿಷ್ಯ ತಿಳಿದುಕೊಳ್ಳಲು ಇಚ್ಚಿಸುತ್ತಾರೆ ಜೊತೆಗೆ ತಮ್ಮ ಹೆಸರಿನ ಅಕ್ಷರದ ಮೇಲೂ ಭವಿಷ್ಯ ತಿಳಿಯುವ ಹಂಬಲ ಹೊಂದಿರುತ್ತಾರೆ. ಬನ್ನಿ ಈಗ ನಾವು ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ವಿಸ್ತಾರವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಯಾವ ಅಕ್ಷರಕ್ಕೆ ಯಾವ ರಾಶಿ
ಈ ಕೆಳಗಿನ ಕೋಷ್ಟಕದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ವಿವರವಾಗಿ ತಳಿಸಿದ್ದೇವೆ. ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಗಮನಿಸುವ ಮೂಲಕ ನೀವು ನಿಮ್ಮ ರಾಶಿ ಅಥವಾ ಜನ್ಮ ರಾಶಿಯನ್ನು ತಿಳಿದುಕೊಳ್ಳಬಹುದು.
ಜನ್ಮ ರಾಶಿ | ರಾಶಿಯ ಅನುಸಾರ ಹೆಸರಿನ ಮೊದಲ ಅಕ್ಷರ |
---|---|
ಮೇಷ | ಅ, ಚ, ಚು, ಚೆ, ಲ, ಲಿ, ಲು, ಲೆ |
ವೃಷಭ | ಉ, ಎ, ಈ, ಔ, ದ, ದೀ, ವೊ |
ಮಿಥುನ | ಕೆ, ಕೊ, ಕೆ, ಘ, ಛ, ಹ, ಡ |
ಕರ್ಕ | ಹಾ, ಹೇ, ಹೋ, ಡಾ, ಹೀ, ಡೋ |
ಸಿಂಹ | ಮಿ, ಮೇ, ಮಿ, ಟೇ, ಟಾ, ಟೀ |
ಕನ್ಯಾ | ಪ, ಷ, ಣ, ಪೆ, ಪೊ, ಪ |
ತುಲಾ | ರೇ, ರೋ, ರಾ, ತಾ, ತೇ, ತೂ |
ವೃಶ್ಚಿಕ | ಲೊ, ನೆ, ನಿ, ನೂ, ಯಾ, ಯಿ |
ಧನು | ಧಾ, ಯೇ, ಯೋ, ಭಿ, ಭೂ, ಫಾ, ಢಾ |
ಮಕರ | ಜಾ, ಜಿ, ಖೋ, ಖೂ, ಗ, ಗೀ, ಭೋ |
ಕುಂಭ | ಗೆ, ಗೋ, ಸಾ, ಸೂ, ಸೆ, ಸೋ, ದ |
ಮೀನ | ದೀ, ಚಾ, ಚಿ, ಝ, ದೋ, ದೂ |
ನಿಮ್ಮ ಹೆಸರು “ಅ, ಚ, ಚು, ಚೆ, ಲ, ಲಿ, ಲು, ಲೆ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮೇಷ ಆಗಿರುತದೆ.
ನಿಮ್ಮ ಹೆಸರು “ಉ, ಎ, ಈ, ಔ, ದ, ದೀ, ವೊ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ವೃಷಭ ಆಗಿರುತದೆ.
ನಿಮ್ಮ ಹೆಸರು “ಕೆ, ಕೊ, ಕೆ, ಘ, ಛ, ಹ, ಡ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮಿಥುನ ಆಗಿರುತದೆ.
ನಿಮ್ಮ ಹೆಸರು “ಹಾ, ಹೇ, ಹೋ, ಡಾ, ಹೀ, ಡೋ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕರ್ಕ ಆಗಿರುತದೆ.
ನಿಮ್ಮ ಹೆಸರು “ಮಿ, ಮೇ, ಮಿ, ಟೇ, ಟಾ, ಟೀ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಸಿಂಹ ಆಗಿರುತದೆ.
ನಿಮ್ಮ ಹೆಸರು “ಪ, ಷ, ಣ, ಪೆ, ಪೊ, ಪ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕನ್ಯಾ ಆಗಿರುತದೆ.
ನಿಮ್ಮ ಹೆಸರು “ರೇ, ರೋ, ರಾ, ತಾ, ತೇ, ತೂ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ತುಲಾ ಆಗಿರುತದೆ.
ನಿಮ್ಮ ಹೆಸರು “ಲೊ, ನೆ, ನಿ, ನೂ, ಯಾ, ಯಿ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ವೃಶ್ಚಿಕ ಆಗಿರುತದೆ.
ನಿಮ್ಮ ಹೆಸರು “ಧಾ, ಯೇ, ಯೋ, ಭಿ, ಭೂ, ಫಾ, ಢಾ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಧನು ಆಗಿರುತದೆ.
ನಿಮ್ಮ ಹೆಸರು “ಜಾ, ಜಿ, ಖೋ, ಖೂ, ಗ, ಗೀ, ಭೋ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮಕರ ಆಗಿರುತದೆ.
ನಿಮ್ಮ ಹೆಸರು “ಗೆ, ಗೋ, ಸಾ, ಸೂ, ಸೆ, ಸೋ, ದ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಕುಂಭ ಆಗಿರುತದೆ.
ನಿಮ್ಮ ಹೆಸರು “ದೀ, ಚಾ, ಚಿ, ಝ, ದೋ, ದೂ” ಅಕ್ಷರಗಳಿಂದ ಪ್ರಾರಂಭವಾಗುತ್ತಿದ್ದರೆ ನಿಮ್ಮ ಜನ್ಮ ರಾಶಿ ಮೀನ ಆಗಿರುತದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಅಕ್ಷರಕ್ಕೆ ಯಾವ ನಕ್ಷತ್ರ ಎಂದು ಈ ಲೇಖನದಲ್ಲಿ ತಿಳಿಯಿರಿ
ಈ ಲೇಖನವನ್ನು ಕೂಡ ಓದಿ: ಮಾಸಗಳ ಹೆಸರು ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅವುಗಳ ಮಹತ್ವ
ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳುವುದು ಏಕೆ ಮಹತ್ವವಾಗಿದೆ?
ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ಅಥವಾ ಜನ್ಮ ರಾಶಿಯನ್ನು ತಿಳಿದುಕೊಳ್ಳುವುದು ಮಹತ್ವವಾಗಿದೆ ಏಕೆಂದರೆ ಇದು ವ್ಯಕ್ತಿಯ ಜೀವನದಲ್ಲಿ ಮುಂದೆ ಘಟಿಸಬಹುದಾದ ತೊಂದರೆಗಳನ್ನು ತಜ್ಞ ಜ್ಯೋತಿಷಿಗಳಿಂದ ತಿಳಿದು ಕೆಲವು ಮುಂಜಾಗರೂಕತೆಯನ್ನು ತೆಗೆದುಕೊಂಡು ಆ ತೊಂದರೆಗಳಿಂದ ಆಗಬಹುದಾದ ನಷ್ಟವನ್ನು ಕಡಿಮೆ ಮಾಡಿ ಕೊಳ್ಳಲು ಸಹಾಯಕವಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ಚಂದ್ರನು ಮನಸ್ಸಿನ ಪ್ರತಿನಿಧಿಯಾಗಿದ್ದು, ಜನ್ಮ ನಕ್ಷತ್ರವನ್ನು ಚಂದ್ರನ ಚಿಹ್ನೆಯ ಮೂಲಕ ವಿಶ್ಲೇಷಿಸಲಾಗುತ್ತದೆ, ಇದು ವ್ಯಕ್ತಿಯ ಮಾನಸಿಕ ಸ್ಥಿರತೆಯನ್ನು ಸೂಚಿಸುತ್ತದೆ. ಹಿಂದಿನ ಕಾಲದಲ್ಲಿ ಜನ್ಮ ರಾಶಿ ಚಕ್ರವನ್ನು ಹೆಸರಿನಿಂದ ತಿಳಿದುಕೊಳ್ಳಬಹುದಿತ್ತು, ಆದರೆ ಈಗ ಕಾಲ ಬದಲಾಗಿದೆ ಮತ್ತು ಹೆಸರಿನಿಂದ ರಾಶಿ ಹೇಳುವುದು ತುಸು ಕಷ್ಟಸಾಧ್ಯವಾಗಿದೆ.
ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದೇ?
ಹುಟ್ಟಿದ ದಿನಾಂಕದ ಮೇಲೆ ಯಾವ ಹೆಸರಿಗೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳಬಹುದು. ಉದಾಹರಣೆಗೆ, ನೀವು ಏಪ್ರಿಲ್ ತಿಂಗಳ ೨೧ನೇ ತಾರೀಕಿನಂದು ಜನಿಸಿದ್ದರೆ, ನಿಮ್ಮ ರಾಶಿ ವೃಷಭ ಆಗಿರುತ್ತದೆ. ಜನ್ಮ ರಾಶಿಯನ್ನು ತಿಳಿಯುವುದು ನಿಮ್ಮ ಜೀವನದ ಮೇಲೆ ರಾಶಿಚಕ್ರದ ಪರಿಣಾಮವನ್ನು ತಿಳಿಯಲು ಸಹಾಯಕವಾಗುತ್ತದೆ. ರಾಶಿಚಕ್ರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಮಾತ್ರವಲ್ಲದೆ, ನಿಮ್ಮ ಜೀವನವನ್ನು ನೀವು ಹೇಗೆ ಬದುಕುತ್ತೀರಿ ಎಂಬುದರ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ.
ಈ ಕೆಳಗಿನ ಕೋಷ್ಟಕದಲ್ಲಿ ಹುಟ್ಟಿದ ದಿನಾಂಕದ ಮೇಲೆ ಯಾವ ರಾಶಿ ಎಂದು ತಿಳಿದುಕೊಳ್ಳಬಹುದು. ನಿಮ್ಮ ಹುಟ್ಟಿದ ದಿನಾಂಕದ ಎದುರಲ್ಲಿ ನಿಮ್ಮ ರಾಶಿಯನ್ನು ಕೊಟ್ಟಿರುತ್ತೇವೆ.
ರಾಶಿ | ಹುಟ್ಟಿದ ದಿನಾಂಕ |
---|---|
ಮೇಷ | 21 ಮಾರ್ಚ್ – 20 ಏಪ್ರಿಲ್ |
ವೃಷಭ | 21 ಏಪ್ರಿಲ್ – 21 ಮೇ |
ಮಿಥುನ | 22 ಮೇ – 21 ಜೂನ್ |
ಕರ್ಕ | 22 ಜೂನ್ – 22 ಜುಲೈ |
ಸಿಂಹ | 23 ಜುಲೈ – 21 ಆಗಸ್ಟ್ |
ಕನ್ಯಾ | 22 ಆಗಸ್ಟ್ – 23 ಸೆಪ್ಟೆಂಬರ್ |
ತುಲಾ | 24 ಸೆಪ್ಟೆಂಬರ್ – 23 ಅಕ್ಟೋಬರ್ |
ವೃಶ್ಚಿಕ | 24 ಅಕ್ಟೋಬರ್ – 22 ನವೆಂಬರ್ |
ಧನು | 23 ನವೆಂಬರ್ – 22 ಡಿಸೆಂಬರ್ |
ಮಕರ | 23 ಡಿಸೆಂಬರ್ – 20 ಜನವರಿ |
ಕುಂಭ | 21 ಜನವರಿ – 19 ಫೆಬ್ರವರಿ |
ಮೀನ | 20 ಫೆಬ್ರವರಿ – 20 ಮಾರ್ಚ್ |
ನಿಷ್ಕರ್ಷೆ
ಈ ಲೇಖನದಲ್ಲಿ ಜ್ಯೋತಿಷ್ಯದಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ ಜೊತೆಗೆ ಹುಟ್ಟಿದ ದಿನಾಂಕದ ಮೂಲಕನು ನಿಮ್ಮ ಜನ್ಮ ರಾಶಿಯನ್ನು ತಿಳಿದುಕೊಳ್ಳುವ ಬಗೆಯನ್ನು ತಿಳಿಸಿದ್ದೇವೆ. ಈಗ ನೀವು ಬಹು ಸುಲಭವಾಗಿ ಯಾವ ಅಕ್ಷರಕ್ಕೆ ಯಾವ ರಾಶಿ ಬರುತ್ತದೆ ಎಂದು ತಿಳಿದುಕೊಳ್ಳಬಹುದು. ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.
Leave a Comment