ಹನುಮಾನ್ ಚಾಲೀಸಾ ಮಂತ್ರವು ಭಗವಂತನಾದ ಮಾರುತಿಯನ್ನು ಸ್ತುತಿಸುವ ನಲವತ್ತು ಶ್ಲೋಕಗಳ ಒಂದು ಅದ್ಬುತವಾದ ಭಕ್ತಿ ಗೀತೆಯಾಗಿದೆ. ಇದು ಹಿಂದಿ ಭಾಷೆಯಲ್ಲಿ ಸಂತ ತುಳಸೀದಾಸರಿಂದ ರಚಿತವಾದದ್ದು, ಮತ್ತು ಭಗವಂತನಾದ ಹನುಮಂತನ ಪರಾಕ್ರಮ ಮತ್ತು ಭಕ್ತಿಯನ್ನು ಸ್ತುತಿಸುವ ಪದ್ಯಗಳಾಗಿವೆ. ಪ್ರತಿ ಪದ್ಯದ ಸಾಲು ಕೂಡ ಹನುಮಾನ್ ಅವರ ವಿವಿಧ ಗುಣಗಳನ್ನು ಮತ್ತು ಕಾರ್ಯಗಳನ್ನು ವರ್ಣಿಸುತ್ತದೆ. ಹನುಮಾನ್ ಚಾಲೀಸಾವನ್ನು ಪಠಿಸುವುದು ಹಿಂದೂ ಧರ್ಮದಲ್ಲಿ ಒಂದು ಪವಿತ್ರ ಆಚರಣೆಯಾಗಿದೆ, ವಿಶೇಷವಾಗಿ ಮಂಗಳವಾರ ಮತ್ತು ಶನಿವಾರಗಳಂದು ಮಾರುತಿಯ ಭಕ್ತರು ಭಕ್ತಿಯಿಂದ ಹನುಮಾನ್ ಚಾಲೀಸಾದ ಪಠಣವನ್ನು ಮಾಡುತ್ತಾರೆ. ಬನ್ನಿ ನಾವು ಕೂಡ ಹನುಮಾನ್ ಚಾಲೀಸಾವನ್ನು ಪಠಣ ಮಾಡೋಣ ಜೊತೆಗೆ ಹನುಮಾನ್ ಚಾಲೀಸಾದ ಬಗೆಗಿನ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳೋಣ.
ಹನುಮಾನ್ ಚಾಲೀಸಾ ಮಂತ್ರ ಕನ್ನಡದಲ್ಲಿ
ದೋಹಾ-
ಶ್ರೀ ಗುರು ಚರಣ ಸರೋಜ ರಜ
ನಿಜಮನ ಮುಕುರ ಸುಧಾರಿ
ವರಣೌ ರಘುವರ ವಿಮಲ ಯಶ
ಜೋ ದಾಯಕ ಫಲಚಾರಿ ||
ಬುದ್ಧಿಹೀನ ತನು ಜಾನಿಕೇ
ಸುಮಿರೌ ಪವನಕುಮಾರ
ಬಲ ಬುದ್ಧಿ ವಿದ್ಯಾ ದೇಹು ಮೋಹಿ
ಹರಹು ಕಲೇಶ ವಿಕಾರ ||
ಚೌಪಾಈ-
ಜಯ ಹನುಮಾನ ಜ್ಞಾನಗುಣಸಾಗರ |
ಜಯ ಕಪೀಶ ತಿಹು ಲೋಕ ಉಜಾಗರ || ೧ ||
ರಾಮದೂತ ಅತುಲಿತ ಬಲಧಾಮಾ |
ಅಂಜನಿಪುತ್ರ ಪವನಸುತ ನಾಮಾ || ೨ ||
ಮಹಾವೀರ ವಿಕ್ರಮ ಬಜರಂಗೀ |
ಕುಮತಿ ನಿವಾರ ಸುಮತಿ ಕೇ ಸಂಗೀ || ೩ ||
ಕಂಚನ ವರಣ ವಿರಾಜ ಸುವೇಶಾ |
ಕಾನನ ಕುಂಡಲ ಕುಂಚಿತ ಕೇಶಾ || ೪ ||
ಹಾಥ ವಜ್ರ ಔರು ಧ್ವಜಾ ವಿರಾಜೈ |
ಕಾಂಧೇ ಮೂಂಜ ಜನೇವೂ ಸಾಜೈ || ೫ ||
ಶಂಕರ ಸುವನ ಕೇಸರೀನಂದನ |
ತೇಜ ಪ್ರತಾಪ ಮಹಾ ಜಗವಂದನ || ೬ ||
ವಿದ್ಯಾವಾನ ಗುಣೀ ಅತಿಚಾತುರ |
ರಾಮ ಕಾಜ ಕರಿವೇ ಕೋ ಆತುರ || ೭ ||
ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
ರಾಮ ಲಖನ ಸೀತಾ ಮನ ಬಸಿಯಾ || ೮ ||
ಸೂಕ್ಷ್ಮರೂಪ ಧರಿ ಸಿಯಹಿ ದಿಖಾವಾ |
ವಿಕಟರೂಪ ಧರಿ ಲಂಕ ಜರಾವಾ || ೯ ||
ಭೀಮರೂಪ ಧರಿ ಅಸುರ ಸಂಹಾರೇ |
ರಾಮಚಂದ್ರ ಕೇ ಕಾಜ ಸಂವಾರೇ || ೧೦ ||
ಲಾಯ ಸಂಜೀವನ ಲಖನ ಜಿಯಾಯೇ |
ಶ್ರೀರಘುವೀರ ಹರಷಿ ವುರ ಲಾಯೇ || ೧೧ ||
ರಘುಪತಿ ಕೀನ್ಹೀ ಬಹುತ ಬಡಾಯೀ |
ತುಮ ಮಮ ಪ್ರಿಯ ಭರತ ಸಮ ಭಾಯೀ || ೧೨ ||
ಸಹಸ ವದನ ತುಮ್ಹರೋ ಯಶ ಗಾವೈ |
ಅಸ ಕಹಿ ಶ್ರೀಪತಿ ಕಂಠ ಲಗಾವೈ || ೧೩ ||
ಸನಕಾದಿಕ ಬ್ರಹ್ಮಾದಿ ಮುನೀಶಾ |
ನಾರದ ಶಾರದ ಸಹಿತ ಅಹೀಶಾ || ೧೪ ||
ಯಮ ಕುಬೇರ ದಿಗಪಾಲ ಜಹಾಂ ತೇ |
ಕವಿ ಕೋವಿದ ಕಹಿ ಸಕೇ ಕಹಾಂ ತೇ || ೧೫ ||
ತುಮ ಉಪಕಾರ ಸುಗ್ರೀವಹಿ ಕೀನ್ಹಾ |
ರಾಮ ಮಿಲಾಯ ರಾಜ ಪದ ದೀನ್ಹಾ || ೧೬ ||
ತುಮ್ಹರೋ ಮಂತ್ರ ವಿಭೀಷಣ ಮಾನಾ |
ಲಂಕೇಶ್ವರ ಭಯ ಸಬ ಜಗ ಜಾನಾ || ೧೭ ||
ಯುಗ ಸಹಸ್ರ ಯೋಜನ ಪರ ಭಾನೂ |
ಲೀಲ್ಯೋ ತಾಹಿ ಮಧುರ ಫಲ ಜಾನೂ || ೧೮ ||
ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
ಜಲಧಿ ಲಾಂಘಿ ಗಯೇ ಅಚರಜ ನಾಹೀ || ೧೯ ||
ದುರ್ಗಮ ಕಾಜ ಜಗತ ಕೇ ಜೇತೇ |
ಸುಗಮ ಅನುಗ್ರಹ ತುಮ್ಹರೇ ತೇತೇ || ೨೦ ||
ರಾಮ ದುವಾರೇ ತುಮ ರಖವಾರೇ |
ಹೋತ ನ ಆಜ್ಞಾ ಬಿನು ಪೈಸಾರೇ || ೨೧ ||
ಸಬ ಸುಖ ಲಹೈ ತುಮ್ಹಾರೀ ಶರಣಾ |
ತುಮ ರಕ್ಷಕ ಕಾಹೂ ಕೋ ಡರನಾ || ೨೨ ||
ಆಪನ ತೇಜ ಸಂಹಾರೋ ಆಪೈ |
ತೀನೋಂ ಲೋಕ ಹಾಂಕ ತೇಂ ಕಾಂಪೈ || ೨೩ ||
ಭೂತ ಪಿಶಾಚ ನಿಕಟ ನಹಿಂ ಆವೈ |
ಮಹಾವೀರ ಜಬ ನಾಮ ಸುನಾವೈ || ೨೪ ||
ನಾಸೈ ರೋಗ ಹರೈ ಸಬ ಪೀರಾ |
ಜಪತ ನಿರಂತರ ಹನುಮತ ವೀರಾ || ೨೫ ||
ಸಂಕಟಸೇ ಹನುಮಾನ ಛುಡಾವೈ |
ಮನ ಕ್ರಮ ವಚನ ಧ್ಯಾನ ಜೋ ಲಾವೈ || ೨೬ ||
ಸಬ ಪರ ರಾಮ ತಪಸ್ವೀ ರಾಜಾ |
ತಿನ ಕೇ ಕಾಜ ಸಕಲ ತುಮ ಸಾಜಾ || ೨೭ ||
ಔರ ಮನೋರಥ ಜೋ ಕೋಯೀ ಲಾವೈ |
ತಾಸು ಅಮಿತ ಜೀವನ ಫಲ ಪಾವೈ || ೨೮ ||
ಚಾರೋಂ ಯುಗ ಪ್ರತಾಪ ತುಮ್ಹಾರಾ |
ಹೈ ಪರಸಿದ್ಧ ಜಗತ ಉಜಿಯಾರಾ || ೨೯ ||
ಸಾಧುಸಂತಕೇ ತುಮ ರಖವಾರೇ |
ಅಸುರ ನಿಕಂದನ ರಾಮ ದುಲಾರೇ || ೩೦ ||
ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ |
ಅಸವರ ದೀನ್ಹ ಜಾನಕೀ ಮಾತಾ || ೩೧ ||
ರಾಮ ರಸಾಯನ ತುಮ್ಹರೇ ಪಾಸಾ |
ಸದಾ ರಹೋ ರಘುಪತಿ ಕೇ ದಾಸಾ || ೩೨ ||
ತುಮ್ಹರೇ ಭಜನ ರಾಮ ಕೋ ಪಾವೈ |
ಜನ್ಮ ಜನ್ಮ ಕೇ ದುಖ ಬಿಸರಾವೈ || ೩೩ ||
ಅಂತಕಾಲ ರಘುಪತಿ ಪುರ ಜಾಯೀ |
ಜಹಾಂ ಜನ್ಮಿ ಹರಿಭಕ್ತ ಕಹಾಯೀ || ೩೪ ||
ಔರ ದೇವತಾ ಚಿತ್ತ ನ ಧರಯೀ |
ಹನುಮತ ಸೇಯಿ ಸರ್ವಸುಖಕರಯೀ || ೩೫ ||
ಸಂಕಟ ಹರೈ ಮಿಟೈ ಸಬ ಪೀರಾ |
ಜೋ ಸುಮಿರೈ ಹನುಮತ ಬಲವೀರಾ || ೩೬ ||
ಜೈ ಜೈ ಜೈ ಹನುಮಾನ ಗೋಸಾಯೀ |
ಕೃಪಾ ಕರಹು ಗುರು ದೇವ ಕೀ ನಾಯೀ || ೩೭ ||
ಯಹ ಶತವಾರ ಪಾಠ ಕರ ಜೋಯೀ |
ಛೂಟಹಿ ಬಂದಿ ಮಹಾಸುಖ ಹೋಯೀ || ೩೮ ||
ಜೋ ಯಹ ಪಢೈ ಹನುಮಾನ ಚಾಲೀಸಾ |
ಹೋಯ ಸಿದ್ಧಿ ಸಾಖೀ ಗೌರೀಸಾ || ೩೯ ||
ತುಲಸೀದಾಸ ಸದಾ ಹರಿ ಚೇರಾ |
ಕೀಜೈ ನಾಥ ಹೃದಯ ಮಹ ಡೇರಾ || ೪೦ ||
ದೋಹಾ-
ಪವನತನಯ ಸಂಕಟ ಹರಣ
ಮಂಗಳ ಮೂರತಿ ರೂಪ ||
ರಾಮ ಲಖನ ಸೀತಾ ಸಹಿತ
ಹೃದಯ ಬಸಹು ಸುರ ಭೂಪ ||
ಹನುಮಾನ್ ಚಾಲೀಸ್ ಮಂತ್ರ ಕನ್ನಡ PDF Download
ಇಲ್ಲಿ ಹನುಮಾನ್ ಚಾಲೀಸ್ ಮಂತ್ರ ಕನ್ನಡ pdf download ಮಾಡುವ ಸೌಲಭ್ಯವನ್ನು ಒದಗಿಸಿರುತ್ತೇವೆ. pdf ಸಂಗ್ರಹದಲ್ಲಿ ಸಂಪೂರ್ಣ ಹನುಮಾನ್ ಚಾಲೀಸ್ ಮಂತ್ರವನ್ನು ಕನ್ನಡ ಬಾಷೆಯಲ್ಲಿ ಒದಗಿಸಿದ್ದೇವೆ, ಕೆಳಗಿನ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಹನುಮಾನ್ ಚಾಲೀಸಾ lyrics download ಮಾಡಬಹುದು.
ಹನುಮಾನ್ ಚಾಲೀಸ – ಕನ್ನಡ ಅನುವಾದ
ಹನುಮಾನ್ ಚಾಲೀಸ ಕನ್ನಡದಲ್ಲಿ
ಜಯ ಹನುಮಾನ ಜ್ಞಾನಗುಣಸಾಗರ
ಜಯ ಕಪೀಶ ಮೂರ್ಲೋಕ ಪ್ರಭಾಕರ
ರಾಮದೂತ ಅತುಲಿತ ಬಲಧಾಮ
ಅಂಜನಿಪುತ್ರ ಪವನಸುತ ನಾಮ
ಮಹಾವೀರ ವಿಕ್ರಮ ಬಜರಂಗೀ
ಕುಮತಿ ನಿವಾರಕ ಸುಮತಿಯ ಸಂಗೀ
ಕಾಂಚನ ರಂಜತ ಸುಂದರ ವೇಷ
ಕರ್ಣಕುಂಡಲ ಗುಂಗುರುಕೇಶ
ವಜ್ರಗದಾಧರ ಧ್ವಜಕರಶೋಭಿತ
ಸುಂದರಭುಜ ಉಪವೀತ ಅಲಂಕೃತ
ಶಂಕರಕುವರ ಕೇಸರೀ ನಂದನ
ತೇಜಪ್ರತಾಪ ಮಹಾ ಜಗವಂದನ
ವಿದ್ಯಾವಾನ ಗುಣೀ ಅತಿ ಚತುರ
ರಾಮಕಾರ್ಯವೆಸಗೆ ಬಲು ಕಾತುರ
ಪ್ರಭುಕಥೆ ಕೇಳುತ ಮೈಮರೆವಾತ
ಮನವಿ ರಾಮ ಸೌಮಿತ್ರಿ ಸೀತ
ಸೂಕ್ಷ್ಮರೂಪವನು ಸೀತೆಗೆ ತೋರಿದೆ
ವಿಕಟರೂಪದಲಿ ಲಂಕೆಯ ದಹಿಸಿದೆ
ಭೀಮರೂಪದಲಿ ಅಸುರರ ಕೊಂದೆ
ರಾಮಚಂದ್ರನ ಕಾರ್ಯವೆಸಗಿದೆ
ಮೂಲಿಕೆ ತಂದು ಸೌಮಿತ್ರಿಯ ಪೊರೆದೆ
ರಾಮನ ಪ್ರೀತಿಯ ಅಪ್ಪುಗೆ ಪಡೆದೆ
ಭರತನಂತೆ ನೀನು ಪ್ರಿಯಸಹೋದರ
ಎನ್ನುತ ಹೊಗಳಿದ ಶ್ರೀರಘುವೀರ
ಸಹಸ್ರಮುಖವು ನಿನ್ನ ಸ್ತುತಿಸಿದೆ
ಎನ್ನುತ ಶ್ರೀಪತಿ ಆಲಿಂಗಿಸಿದ
ಸನಕಬ್ರಹ್ಮಾದಿ ಮುನಿವರೇಣ್ಯರು
ನಾರದ ಶಾರದೆ ಆದಿಶೇಷರು
ಯಮಕುಬೇರ ದಿಕ್ಪಾಲಕರೆಲ್ಲರು
ಕವಿಕೋವಿದರು ನಿನ್ನ ಸ್ತುತಿಸಿಹರು
ಸುಗ್ರೀವಗೆ ನೀ ಸಹಾಯ ಮಾಡಿದೆ
ರಾಮಸಖ್ಯದಿ ರಾಜ್ಯ ಕೊಡಿಸಿದೆ
ನಿನ್ನುಪದೇಶ ವಿಭೀಷಣ ಒಪ್ಪಿದ
ಲಂಕೇಶನಾದುದ ಜಗವೇ ಬಲ್ಲದು
ಮಧುರ ಹಣ್ಣೆಂದು ತಿಳಿದು ರವಿಯನು
ಪಿಡಿಯೆ ಹಾರಿದೆ ಸಹಸ್ರಯೋಜನ
ಪ್ರಭುಮುದ್ರಿಕೆಯನು ಧರಿಸಿ ಬಾಯಲಿ
ಶರಧಿ ಲಂಘನವು ಸೋಜಿಗವಲ್ಲ
ಎಷ್ಟೇ ಕಠಿಣ ಕಾರ್ಯವೇ ಇರಲಿ
ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ
ರಾಮನ ದ್ವಾರಪಾಲಕ ನೀನು
ನಿನ್ನಾಜ್ಞೆ ವಿನಾ ಒಳ ಬರಲಾರೆನು
ಸುಖವೆಲ್ಲ ನಿನಗೆ ಶರಣಾಗಿ ಇರಲು
ಭಯವೇಕೆ ಎಮಗೆ ನೀ ರಕ್ಷಿಸಲು
ನಿನ್ನ ತೇಜ ನಿನ್ನಂದಲೆ ಶಮನ
ನಿನ್ನ ಘರ್ಜನೆಗೆ ತ್ರಿಲೋಕ ಕಂಪನ
ಮಹಾವೀರ ನಿನ್ನ ನಾಮವ ಕೇಳಲು
ಸನಿಹಕೆ ಬರದು ಭೂತಪ್ರೇತಗಳು
ಹನುಮ ನಿನ್ನನು ಸದಾ ಭಜಿಸಲು
ನಾಶವಾಗುವುವು ರೋಗರುಜಗಳು
ಹನುಮನ ಧ್ಯಾನಿಸೆ ತ್ರಿಕರಣದಿಂದ
ಕಷ್ಟಕಾರ್ಪಣ್ಯವು ದೂರಾಗುವುದು
ತಪಸ್ವೀರಾಮನ ಕಾರ್ಯಗಳೆಲ್ಲವ
ಯಶಸ್ಸಿನಿಂದ ಸಫಲಗೊಳಿಸಿದವ
ನೆರವೇರಿಸುತಲಿ ಭಕ್ತರಾಭೀಷ್ಟವ
ಅಮಿತ ಫಲವನು ನೀ ಕರುಣಿಸುವೆ
ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ
ನಿನ್ನಯ ಪ್ರಭೆಯ ಲೋಕ ಬೆಳಗಿದೆ
ಸಾಧುಸಂತರನು ಪೊರೆದು ಸಲಹಿದೆ
ಅಸುರರ ಕೊಂದು ರಾಮಪ್ರಿಯನಾದೆ
ಅಷ್ಟಸಿದ್ಧಿ ನವನಿಧಿಯ ಕೊಡುವವ
ಜಾನಕಿ ಮಾತೆಯಿಂ ವರವ ಪಡೆದವ
ನಿನ್ನಲಿ ಇರಲು ರಾಮರಸಾಯನ
ಸದಾ ರಘುಪತಿಯ ದಾಸನು ನೀನು
ನಿನ್ನ ಭಜಿಸಿದವ ರಾಮನ ಪಡೆವ
ಜನ್ಮಜನ್ಮದ ದುಃಖವ ಮರೆವ
ಜೀವಿಸಿರಲು ಹರಿಭಕ್ತನೆನಿಸುವ
ಅಂತ್ಯಸಮಯದಿ ರಾಮನ ಸೇರುವ
ಅನ್ಯದೇವರನು ಭಜಿಸದಿದ್ದರು
ಹನುಮನ ಸೇವಿಸೆ ಸುಖವ ಪಡೆವರು
ವೀರ ಹನುಮನ ಭಜಿಸಲು ಭಕ್ತರು
ವ್ಯಾಧಿ ಸಂಕಟದಿ ಮುಕ್ತಿ ಪಡೆವರು
ಜಯ ಜಯ ಜಯ ಹನುಮಾನ ಗೋಸಾಯಿ
ಗುರುವಿನಂದದಿ ಕೃಪೆ ಇದು ಸಾಯಿ
ನೂರು ಬಾರಿ ಇದ ಪಠಣ ಮಾಡಿದವ
ಬಂಧನ ಕಳಚುತ ನಿಜ ಸುಖ ಪಡೆವ
ಯಾರು ಪಠಿಸುವರೊ ಹನುಮ ಚಾಲೀಸ
ಸಿದ್ಧಿ ಪಡೆಯುವರು ಸಾಕ್ಷಿ ಗೌರೀಶ
ತುಲಸೀದಾಸ ಸದಾ ಹರಿಭಕ್ತ
ವಾಸಿಸು ಎನ್ನ ಹೃದಯದಿ ನಾಥ
ಪರಮ ಭಕ್ತ ಶ್ರೀ ತುಲಸೀದಾಸರ
ಚರಣಕೆ ವಂದಿಪೆ ನಿತ್ಯ ನಿರಂತರ
ಮಂಗಳ ಶ್ಲೋಕ
ಪವನ ತನಯ ಸಂಕಟಹರಣ ಮಂಗಳಮೂರುತಿ ರೂಪ
ರಾಮ ಸೌಮಿತ್ರಿ ಸೀತಾ ಸಹಿತ ನೆಲೆಸು ಹೃದಯದಿ ಸುರಭೂಪ
ಹನುಮನ ದಯೆಯಿಂ ಅತನ ಚರಿತೆಯ
ಕನ್ನಡ ಭಾಷೆಗೆ ಬರೆದಂತಾಯ್ತು
ಇಂತು ಚೈತನ್ಯವ ನೀಡಿದ ಪ್ರಭುವನು
ಚೈತನ್ಯದಾಸ ಭಕ್ತಿಲಿ ನಮಿಪನು
||ಓಂ ಶಾಂತಿಃ ಶಾಂತಿಃ ಶಾಂತಿಃ ||
ಹನುಮಾನ್ ಮಂತ್ರ ಕನ್ನಡ ಭಾಷೆಯಲ್ಲಿ ಪಠಿಸಿ
ಹನುಮಾನ್ ಚಾಲೀಸಾದ ಹಿನ್ನೆಲೆ ಅಥವಾ ಇತಿಹಾಸ
ಹನುಮಾನ್ ಚಾಲೀಸಾವು ಭಗವಾನ್ ಹನುಮಂತನನ್ನು ಸ್ತುತಿಸುವ ಒಂದು ಭಕ್ತಿ ಗೀತೆಯಾಗಿದ್ದು, ಇದರಲ್ಲಿ ನಲವತ್ತು ಶ್ಲೋಕಗಳಿವೆ. ಇದನ್ನು ಖ್ಯಾತ ಕವಿ ಸಂತ ಗೋಸ್ವಾಮಿ ತುಳಸಿದಾಸರು 16ನೇ ಶತಮಾನದಲ್ಲಿ ರಚಿಸಿರುತ್ತಾರೆ, ಅವರು ವಾಲ್ಮೀಕಿ ಮಹರ್ಷಿಗಳ ಮರು ಅವತಾರವೆಂದು ಕೂಡ ನಂಬಲಾಗಿದೆ. ಹನುಮಾನ್ ಚಾಲೀಸಾವು ಹಿಂದೂ ಧರ್ಮದಲ್ಲಿ ವಿಶೇಷವಾದ ಮಹತ್ವವನ್ನು ಹೊಂದಿದೆ. ಹನುಮಾನ್ ಚಾಲೀಸಾವನ್ನು ರಚಿಸಿದ ಸಮಯದಲ್ಲಿ ಸಂತ ತುಳಸಿದಾರು ಹರಿದ್ವಾರದ ಕುಂಭ ಮೇಳದಲ್ಲಿ ಸಮಾಧಿ ಸ್ಥಿತಿಯಲ್ಲಿ ಧ್ಯಾನ ಮಗ್ನರಾಗಿದ್ದರು ಎಂದು ನಂಬಲಾಗಿದೆ. ಈ ಗೀತೆಯು ಭಕ್ತರಿಗೆ ಮಾನಸಿಕ ಶಾಂತಿ ಮತ್ತು ಆತ್ಮಿಕ ಬಲವನ್ನು ನೀಡುವ ಮತ್ತು ಅವರ ಭಕ್ತಿಯನ್ನು ದೃಢಪಡಿಸುವ ಒಂದು ಸಾಧನವಾಗಿದೆ. ಹನುಮಾನ್ ಚಾಲೀಸಾವು ಹನುಮಂತನ ವೀರತ್ವ, ಬಲ, ಭಕ್ತಿ ಮತ್ತು ಶ್ರೀರಾಮನ ಪ್ರತಿ ನಿಷ್ಠೆಯನ್ನು ವರ್ಣಿಸುತ್ತದೆ.
ಶ್ರೀ ರಾಮ ರಕ್ಷಾ ಸ್ತೋತ್ರ ಪಠಣ ಮತ್ತು ಸಂಪೂರ್ಣ ಪರಿಚಯ
ಹನುಮಾನ್ ಚಾಲೀಸಾವನ್ನು ಏಕೆ ಪಠಿಸಬೇಕು?
ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ನಮಗೆ ಅನೇಕ ಪ್ರಯೋಜನಗಳಿವೆ. ಇದು ಭಕ್ತರಿಗೆ ಆತ್ಮಿಕ ಶಕ್ತಿ, ಮಾನಸಿಕ ಶಾಂತಿ ಮತ್ತು ಸಂಕಟಗಳಿಂದ ಮುಕ್ತಿಯನ್ನು ನೀಡುವ ಒಂದು ಮಾಧ್ಯಮವಾಗಿದೆ. ಕೆಳಗಿನ ವಿವರಣೆಗಳು ಹನುಮಾನ್ ಚಾಲೀಸಾವನ್ನು ಪಠಿಸಬೇಕಾದ ಕಾರಣಗಳನ್ನು ವಿವರಿಸುತ್ತವೆ:
ಆರ್ಥಿಕ ತೊಂದರೆಗಳು ದೂರವಾಗುತ್ತವೆ: ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಆರ್ಥಿಕ ತೊಂದರೆಗಳು ದೂರವಾಗುತ್ತವೆ ಮತ್ತು ಆರ್ಥಿಕ ಸ್ಥಿರತೆ ಸಿಗುತ್ತದೆ.
ಭಯದಿಂದ ಮುಕ್ತಿ: ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಇದು ಭಕ್ತರಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತದೆ.
ಸಂಕಟಗಳಿಂದ ರಕ್ಷಣೆ: ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಸಂಕಟಗಳು ದೂರವಾಗುತ್ತವೆ ಮತ್ತು ಭಕ್ತರು ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.
ಭಕ್ತಿ ಮತ್ತು ಶ್ರದ್ಧೆಯನ್ನು ಬಲಪಡಿಸುತ್ತದೆ: ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರಿಂದ ಭಕ್ತರ ಭಕ್ತಿ ಮತ್ತು ಶ್ರದ್ಧೆಯನ್ನು ಬಲಪಡಿಸುತ್ತದೆ.
ಮಾನಸಿಕ ಶಾಂತಿ: ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಮತ್ತು ಆತ್ಮಿಕ ಸಮಾಧಾನ ಸಿಗುತ್ತದೆ.
ದೈವಿಕ ಆಶೀರ್ವಾದ: ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಭಗವಾನ್ ಹನುಮಂತ ಮತ್ತು ಶ್ರೀರಾಮನ ದೈವಿಕ ಆಶೀರ್ವಾದ ಸಿಗುತ್ತದೆ.
ಈ ಕಾರಣಗಳಿಂದ, ಹನುಮಾನ್ ಚಾಲೀಸಾವನ್ನು ಪಠಿಸುವುದು ಭಕ್ತರಿಗೆ ಅನೇಕ ಆಧ್ಯಾತ್ಮಿಕ ಮತ್ತು ಭೌತಿಕ ಲಾಭಗಳನ್ನು ತರುತ್ತದೆ.
ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಮೊದಲು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತೀ ಮುಖ್ಯ. ಈ ಮುನ್ನೆಚ್ಚರಿಕೆಗಳು ಪಠಣದ ಸಮಯದಲ್ಲಿ ಭಕ್ತರು ಅನುಭವಿಸುವ ಆಧ್ಯಾತ್ಮಿಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲು ಮತ್ತು ಹನುಮಾನ್ ಚಾಲೀಸಾ ಪಠಣದ ಪ್ರಭಾವವನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತವೆ:
ಶುಚಿತ್ವ ಪಾಲನೆ: ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಮೊದಲು ಸ್ನಾನ ಮಾಡಿ ದೇಹವನ್ನು ಶುಚಿಯಾಗಿಟ್ಟುಕೊಂಡಿರಬೇಕು. ಇದು ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ಆಧ್ಯಾತ್ಮಿಕ ಶಕ್ತಿಗಳಿಗೆ ಸ್ವಾಗತ ಕೋರುವ ಒಂದು ರೀತಿಯಾಗಿದೆ.
ಪೂಜಾ ಸ್ಥಳದ ಶುಚಿತ್ವ: ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಸ್ಥಳವನ್ನು ಶುಚಿಯಾಗಿಡಬೇಕು. ಇದು ಪೂಜಾ ಸ್ಥಳದಲ್ಲಿ ಶುಭ ಶಕ್ತಿಗಳನ್ನು ಆಕರ್ಷಿಸುತ್ತದೆ.
ಮನಸ್ಸನ್ನು ಏಕಾಗ್ರತೆಗೊಳಿಸುವುದು: ಹನುಮಾನ್ ಚಾಲೀಸಾವನ್ನು ಪಠಣ ಮಾಡುವ ಮೊದಲು ಮನಸ್ಸನ್ನು ಶಾಂತಗೊಳಿಸಿ, ಏಕಾಗ್ರತೆಯನ್ನು ಹೊಂದಬೇಕು. ಇದು ಪಠಣದ ಪ್ರಭಾವವನ್ನು ಹೆಚ್ಚಿಸುತ್ತದೆ.
ಸಮರ್ಪಣಾ ಭಾವನೆ: ಹನುಮಾನ್ ಚಾಲೀಸಾವನ್ನು ಪಠಣ ಮಾಡುವಾಗ ಸಮರ್ಪಣಾ ಭಾವನೆಯಿಂದ ಇರಬೇಕು. ಇದು ಭಗವಾನ್ ಹನುಮಂತನ ಮೇಲಿನ ಭಕ್ತಿಯನ್ನು ದೃಢಪಡಿಸುತ್ತದೆ.
ಸಮಯ ಮತ್ತು ಸ್ಥಳ: ಪ್ರಾತಃಕಾಲ ಅಥವಾ ಸಂಜೆಯ ಸಮಯವನ್ನು ಪಠಣಕ್ಕೆ ಆಯ್ಕೆ ಮಾಡಿ, ಶಾಂತವಾದ ಮತ್ತು ಪವಿತ್ರವಾದ ಸ್ಥಳದಲ್ಲಿ ಪಠಣ ಮಾಡಬೇಕು.
ದೀಪ ಮತ್ತು ಧೂಪದ ಬಳಕೆ: ಪಠಣ ಮಾಡುವ ಮೊದಲು ದೀಪ ಮತ್ತು ಧೂಪವನ್ನು ಹಚ್ಚಬೇಕು. ಇದು ಪೂಜಾ ಸ್ಥಳದಲ್ಲಿ ಪವಿತ್ರತೆಯ ವಾತಾವರಣವನ್ನು ಸೃಷ್ಟಿಸುತ್ತದೆ.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸುವುದರಿಂದ, ಭಕ್ತರು ಹನುಮಾನ್ ಚಾಲೀಸಾವನ್ನು ಪಠಣ ಮಾಡುವಾಗ ಅಧಿಕ ಆಧ್ಯಾತ್ಮಿಕ ಲಾಭಗಳನ್ನು ಪಡೆಯಬಹುದು.
ಕೊನೆಯದಾಗಿ
ಹನುಮಾನ್ ಚಾಲೀಸಾ ಮಂತ್ರದ ಬಗ್ಗೆ ಈ ಲೇಖನದಲ್ಲಿ ಅತಿ ವಿವರವಾಗಿ ತಿಳಿಸಿರುತ್ತೇವೆ, ಜೊತೆಗೆ ಹನುಮಾನ್ ಚಾಲೀಸಾ ಮಂತ್ರವನ್ನು ಕನ್ನಡ ಬಾಷೆಯಲ್ಲಿ ಒದಗಿಸಿರುತ್ತವೆ. ತಾವು ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸುವುದರಿಂಗ ಮಹಿಮಾ ಮೂರ್ತಿಯಾದ ಭಗವಾನ್ ಮಾರುತಿಯ ಕ್ತುಪೆಗೆ ಪಾತ್ರರಾಗೋಣ. ನಮ್ಮ ಈ ಪ್ರಯತ್ನ ನಿಮಗೆ ತೃಪ್ತಿ ನೀಡಿದ್ದಾರೆ ದಯವಿಟ್ಟು ನಮ್ಮ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಧನ್ಯವಾದ.
Leave a Comment